ಮೇಜರ್ ಲೀಗ್ ಕ್ರಿಕೆಟ್ () ಅಮೇರಿಕಾದಲ್ಲಿ ನಡೆಯುವ ಒಂದು ವೃತ್ತಿಪರ ಟ್ವೆಂಟಿ20 ಕ್ರಿಕೆಟ್ ಲೀಗ್ ಆಗಿದೆ. ಅಮೇರಿಕನ್ ಕ್ರಿಕೆಟ್ ಎಂಟರ್‌ಪ್ರೈಸಸ್ (ಎಸಿಇ) ಈ ಕ್ರಿಕೆಟ್ ಲೀಗ್ ಅನ್ನು ನಿರ್ವಹಿಸುತ್ತಿದ್ದು, ಯುಎಸ್‌ಎ ಕ್ರಿಕೆಟ್‌ ಇದನ್ನು ಮಂಜೂರು ಮಾಡಿದೆ. ಈ ಲೀಗ್ ನ ಮೊದಲ ಆವೃತ್ತಿ, ಜುಲೈ 13, 2023 ರಿಂದ ಜುಲೈ 30, 2023ರವರೆಗೆ ನಡೆಯಿತು. ಅಮೇರಿಕಾದ ಆರು ನಗರಗಳನ್ನು ಪ್ರತಿನಿಧಿಸುವ ಆರು ತಂಡಗಳು ಈ ಲೀಗ್ನಲ್ಲಿ ಭಾಗವಹಿಸಿವೆ. ಮೊದಲ ಸೀಸನ್ ನ ಎಲ್ಲಾ ಪಂದ್ಯಗಳು ಟಿಕ್ಸಾಸ್ ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂ ಮತ್ತು ನಾರ್ತ್ ಕೆರೊಲಿನಾದ ಮೋರಿಸ್‌ವಿಲ್ಲೆಯಲ್ಲಿರುವ ಚರ್ಚ್ ಸ್ಟ್ರೀಟ್ ಪಾರ್ಕ್‌ನಲ್ಲಿ ನಡೆದವು. == ತಂಡಗಳು == ಮೇಜರ್ ಲೀಗ್ ಕ್ರಿಕೆಟ್ ಆರು ತಂಡಗಳೊಂದಿಗೆ ಪ್ರಾರಂಭವಾಯಿತು ಮತ್ತು ಪ್ರತಿ ತಂಡಕ್ಕೆ ಹೂಡಿಕೆದಾರರು-ನಿರ್ವಾಹಕರನ್ನು ನಿಯೋಜಿಸಲಾಗಿದೆ. ಭವಿಷ್ಯದಲ್ಲಿ ಹತ್ತು ತಂಡಗಳಿಗೆ ವಿಸ್ತರಿಸುವ ಆಶಯ ಅಮೇರಿಕನ್ ಕ್ರಿಕೆಟ್ ಎಂಟರಪ್ರೈಸ್ ಹೊಂದಿದೆ. ಯುಎಸ್ಎ ಕ್ರಿಕೆಟ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಇಯಾನ್ ಹಿಗ್ಗಿನ್ಸ್ ಅವರು ತಮ್ಮ ದೇಶದಲ್ಲಿ ಅಟ್ಲಾಂಟಾ, ಚಿಕಾಗೋ, ಲಾಸ್ ಏಂಜಲೀಸ್, ನ್ಯೂಜೆರ್ಸಿ, ನ್ಯೂಯಾರ್ಕ್, ಮತ್ತು ಸ್ಯಾನ್ ಫ್ರಾನ್ಸಿಸ್ಕೋ ನಗರಗಳಲ್ಲಿ ಕ್ರಿಕೆಟ್ ಕ್ರೀಡೆಯು ಹೆಚ್ಚು ಜನಪ್ರಿಯವಾಗಿರುವುದನ್ನು ಗುರುತಿಸಿದ್ದಾರೆ. ಈ ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ (2023) ಒಟ್ಟು ಆರು ತಂಡಗಳು ಡಲ್ಲಾಸ್, ಲಾಸ್ ಏಂಜಲೀಸ್, ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ, ಸಿಯಾಟಲ್, ಮತ್ತು ವಾಷಿಂಗ್ಟನ್, .. ನಗರಗಳನ್ನು ಪ್ರಿತನಿಧಿಸಿದ್ದವು. === 2023ರ ತಂಡಗಳು === == ಪಂದ್ಯಾವಳಿ ಮತ್ತು ಫಲಿತಾಂಶಗಳು == == ಉಲ್ಲೇಖಗಳು ==